ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ

ಹುಡುಕಾಟ ಅವನನ್ನು ಹುಡುಕುತ್ತಿದ್ದೆನಿತ್ಯ ನಿರಂತರವಾಗಿಅವನಿಗಾಗಿ ಹಂಬಲಿಸುತ್ತಿದ್ದೆಅವನು ಕಾಣದೆ ಕೊರಗಿ ಹೋದಲ್ಲೆಲ್ಲ, ಬಂದಲ್ಲೆಲ್ಲಎಲ್ಲಿಯೂ ಇರುವಿಕೆಯಕುರುಹು ಕಾಣಲಿಲ್ಲಹುಡುಕುವಲ್ಲೆಲ್ಲಅವನು ಸಿಗಲೇ ಇಲ್ಲಬಹುಶಃ ಅಲ್ಲೆಲ್ಲ ಇರಲೇ ಇಲ್ಲ ಆದರೂ ಹುಡುಕ ಹೊರಟೆಮಸೀದಿ, ಮಂದಿರ,ಇಗರ್ಜಿಗಳ ಒಳಗೆಬೆಟ್ಟದ ಶಿಖರದ ತುತ್ತ ತುದಿಯ ಮೇಲೆಗುಹೆ, ಕಣಿವೆ, ಕಂದರಗಳ ನಡುವೆಹಿಮದ ಹರಳಲ್ಲೂಮರಳ ಕಣಕಣದಲ್ಲೂನದಿಯ ಅಲೆಗಳಲ್ಲಿಕಡಲ ಕಿನಾರೆಯಲ್ಲಿಮುಗಿಲ ಮಾರುತದಲ್ಲಿಹೊರಗೆಲ್ಲಿಯೂ ಅವನಅಸ್ತಿತ್ವ ಕಾಣದಾದೆ ಒಂದೆಡೆ ಕುಳಿತೆಬುದ್ದನಂತಾಗಿಮಾಯೆಯ ಲೋಕದಹೊರ ಕಣ್ಣು ಮುಚ್ಚಿದೆಒಳ ಅರಿವಿನ ಕಣ್ಣು ತೆರೆದೆನನ್ನ ಅಂತರಂಗದೊಳಗೆ ಇಣುಕಿದೆಅವನನ್ನು ಶೋಧಿಸಿದೆಬೆಳಕೊಂದನು ಕಂಡೆಎಲ್ಲೂ ಕಾಣದ ಅವನನನ್ನೊಳಗೆ ನಾ ಕಂಡುಪಾವನನಾದೆ ನಿಜ!ಅವನು ಎಲ್ಲೆಡೆಯೂ ಇದ್ದ,ಇದ್ದಾನೆ ಮತ್ತು … Continue reading ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ